Sigandur Chowdeshwari Temple / ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಕುರಿತದಾದ ವಿವರ ! ಬೆಂಗಳೂರು-ಸಿಗಂದೂರು ಪ್ರಯಾಣ

Sigandur Chowdeshwari Temple Timings and Sigandur Bangalore distance

Sigandur Chowdeshwari Temple / ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಕುರಿತದಾದ ವಿವರ ! ಬೆಂಗಳೂರು-ಸಿಗಂದೂರು ಪ್ರಯಾಣ
Sigandur Chowdeshwari Temple Timings and Sigandur Bangalore distance

SHIVAMOGGA |  Jan 13, 2024  |   ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಮಲೆನಾಡಿನ ಪ್ರಸಿದ್ದ ಹಾಗೂ ಪವಿತ್ರ ಕ್ಷೇತ್ರಗಳಲ್ಲಿ  ಒಂದು

ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ

ಶಿವಮೊಗ್ಗ ಜಿಲ್ಲೆಯ ಸಿಗಂದೂರು, ಕಳಸವಳ್ಳಿ ಭಾಗದಲ್ಲಿ ಈ ದೇವಸ್ಥಾನವಿದೆ.   ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಕ್ಕೆ ವಿಶಿಷ್ಟವಾದ ಇತಿಹಾಸ ಇದೆ..  300 ವರ್ಷಗಳ ಹಿಂದೆ ಪವಿತ್ರ ಶರಾವತಿ ನದಿಯ ದಡದಲ್ಲಿ ದೇವಿಯ ವಿಗ್ರಹ  ಕಾಣಸಿಕ್ಕಿತು ಎಂದು ಹೇಳಲಾಗುತ್ತದೆ.  

ಇದನ್ನೂ ಸಹ ಓದಿ : #Gandhadagudi ಪುನೀತ್​ ರಾಜಕುಮಾರ್​ರವರ ಕಾಳಿಂಗ ದರ್ಶನ ಹೇಗಿತ್ತು ಗೊತ್ತಾ? Story by JP

Sigandur distance from Bangalore 

ಬೆಂಗಳೂರಿನಿ೦ದ ಸಿಗಂದೂರುವರೆಗಿನ ದೂರವು ರಸ್ತೆಯ ಮೂಲಕ ಸರಿಸುಮಾರು 330 ಕಿ.ಮೀ. ಆಗುತ್ತದೆ. ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣ  ಆಗಿರುವುದರಿಂದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಬರಬಹುದಾಗಿದೆ. ವಿಮಾನ ನಿಲ್ದಾಣದಿಂದ ಶಿವಮೊಗ್ಗ ಬಸ್​ ನಿಲ್ದಾಣಕ್ಕೆ ಬಂದು ಖಾಸಗಿ ಅಥವಾ ಸರ್ಕಾರಿ ಬಸ್​  ಮೂಲಕ ಸಾಗರ ಅಥವಾ ಹೊಸನಗರದ ಮೂಲಕ ಸಿಗಂದೂರಿಗೆ ಪ್ರಯಾಣಿಸಬಹುದು. ನೇರ ಬಸ್​ ಸಂಪರ್ಕವೂ ಸಾಧ್ಯವಿದೆ. 

ಬೈ ರೋಡ್​ನಲ್ಲಿ ಬೆಂಗಳೂರಿನಿಂದ ಸಿಗಂದೂರುಗೆ ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿ 75 ಅಥವಾ ಎನ್ಎಚ್ 69 ರಲ್ಲಿ ಸಾಗಬೇಕಾಗುತ್ತದೆ. ತುಮಕೂರು, ಸಿರಾ ಹೀಗೆ ಸಾಗಿ ಬಂದು ಶಿವಮೊಗ್ಗ, ಸಾಗರ ತಲುಪಿ ಸಿಗಂದೂರು ತಲಪಬಹುದು. ಹೊಸನಗರದ ಮೂಲಕವೂ ಸಿಗಂದೂರಿಗೆ ನೇರವಾಗಿ ರಸ್ತೆ ಮಾರ್ಗದಲ್ಲಿ ಸಾಗಬಹುದು. 

ಸಿಗಂದೂರು ದೇವಸ್ಥಾನದ ಸಮಯ /Sigandur Chowdeshwari Temple Timings

ಸಿಗಂದೂರು ಚೌಡೇಶ್ವರಿ ದೇವಾಲಯವೂ ದೇವಾಲಯದ ಅಧಿಕೃತ ವೆಬ್​ಸೈಟ್​ನ ಮಾಹಿತಿಯಂತೆ   ಸಮಯ3:30 AM ನಿಂದ 7:00 AM, 8:00 AM ನಿಂದ 2:30 PM, ಮತ್ತು 5:30 PM ನಿಂದ 7:30 AM ವರೆಗೆ ದರ್ಶನ ಸಿಗುತ್ತದೆ. 

ಸಿಗಂದೂರು ಜಾತ್ರೆ / Sigandur jatre 

ವರ್ಷ ವರ್ಷ ಮಕರ ಸಂಕ್ರಮಣದ ಸಂದರ್ಭದಲ್ಲಿ  ಸಿಗಂದೂರು ಜಾತ್ರೆ ನಡೆಯಲಿದ್ದು ಈ ವರ್ಷವೂ ವಿದ್ಯುಕ್ತವಾಗಿ ಜಾತ್ರೆ ನಡೆಯುತ್ತಿದೆ. ಈ ಸಂಬಂಧ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ / ಅಮ್ಮನವರ ಜಾತ್ರೆ ಯಾವಾಗ ಗೊತ್ತಾ? ವಿವರ ಇಲ್ಲಿದೆ  ಈ ಆರ್ಟಿಕಲ್ ಓದಬಹುದು. 

ಸಿಗಂದೂರು ದೇವಾಲಯದ ವಿಳಾಸ /Sigandur Chowdeshwari Temple address 

Sri Sigandur Chowdamma Devi Trust (R), Sri Sigandur Chowdeshwari Temple, Village – Kalasavalli, Post – Tumari, Taluk – Sagara, District – Shivamogga, Karnataka, INDIA -577453 

Mail ID : info@sigandurchowdeshwari.com

ಕೊಲ್ಲೂರು ಮೂಕಾಂಬಿಕೆ/Kollur Mookambika

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರು ಅದೇ ಮಾರ್ಗವಾಗಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಮೂಕಾಂಬಿಕೆಯ ದರ್ಶನ ಪಡೆದು ಪುನೀತರಾಗುತ್ತಾರೆ.